ಚಿತ್ರ: ಶುಭಮಂಗಳ
ಸಂಗೀತ: ವಿಜಯಭಾಸ್ಕರ್
ಗಾಯನ: ವಾಣಿ ಜಯರಾಮ್

ಈ ಶತಮಾನದ ಮಾದರಿ ಹೆಣ್ಣು
ಸ್ವಾಭಿಮಾನದ ಸಾಹಸಿ ಹೆಣ್ಣು |೨|

ಗುಲಾಮಳಿವಳಲ್ಲಾ.. ಸಲಾಮು ಹೊಡೆಯೊಲ್ಲಾ!
ಕುತಂತ್ರವಿಲ್ಲದೆ.. 
ಅತಂತ್ರವಾಗದೆ.. 

ಸ್ವತಂತ್ರಳಾಗಿಹಳು!

ಈ ಶತಮಾನದ ಮಾದರಿ ಹೆಣ್ಣು
ಸ್ವಾಭಿಮಾನದ ಸಾಹಸಿ ಹೆಣ್ಣು 

ನಾಗರೀಕತೆಯ ನಾಟಕದಲ್ಲಿ ನಟಿಸುವ ಹೆಣ್ಣಲ್ಲಾ!
ಆದುನಿಕತೆಯ ಅಹಂಕಾರದಲಿ ಮೆರೆಯುವ ಹೆಣ್ಣಲ್ಲಾ!

ಆದರ್ಶವಿಲ್ಲದ ಅಂದಥೆಯಲ್ಲಿ ಅಳಿಯುವ ಹೆಣ್ಣಲ್ಲಾ!
ವಿವೇಕವೀರದ, ವಿಚಾರಧಾರೆಯ, ವಿಬಿನ್ನ ರುಚಿಯವಳು!

ಈ ಶತಮಾನದ ಮಾದರಿ ಹೆಣ್ಣು
ಸ್ವಾಭಿಮಾನದ ಸಾಹಸಿ ಹೆಣ್ಣು 

ಮಾನಾಭಿಮಾನಕೆ ಮಾನ್ಯತೆ ನೀಡುವ ಮಾಲಿನಿ ಹೆಣ್ಣು!

ಮನತನ ಗೌರವ, ಮಂಗಳ ದೀಪವ ಬೆಳುಗುವಳೀ ಹೆಣ್ಣು!
ದುಡಿಮೆಯ ದೇವರು ಎನ್ನುವ ಮಂತ್ರದ ಮಾಂತ್ರಿಕಳೀ ಹೆಣ್ಣೂ!
ವಿಲಾಸ ಜೀವನ ವಿಚಿತ್ರ ವೇಷಕೆ ವಿರೋಧಿಯಾಗಿಹಳು!

ಈ ಶತಮಾನದ ಮಾದರಿ ಹೆಣ್ಣು
ಸ್ವಾಭಿಮಾನದ ಸಾಹಸಿ ಹೆಣ್ಣು 

ರಾಜತಂತ್ರದ ಚದುರಂಗದಲಿ ಚತಮಕ ಚತುರೆ ಈ ಹೆಣ್ಣು!
ಬಾಳಿನ ಬಗೆ ಬಗೆ ಬಣ್ಣದ ಬದುಕಿನ ನಾಯಕಿ ಈ ಹೆಣ್ಣು!
ವಿದ್ಯಾ ಬುದ್ಧಿಯ, ಸಿದ್ಧಿ-ಪ್ರಸಿದ್ಧಿಯ ಸಾದಕಳೀ ಹೆಣ್ಣೂ!
ವಿಷೇಶ ಪ್ರತಿಭೆಯ ವಿಶಾಲ ಕೀರ್ತಿಯ ವಿಜೆತಳಾಗಿಹಳು!

ಈ ಶತಮಾನದ ಮಾದರಿ ಹೆಣ್ಣು
ಸ್ವಾಭಿಮಾನದ ಸಾಹಸಿ ಹೆಣ್ಣು 

ಗುಲಾಮಳಿವಳಲ್ಲಾ.. ಸಲಾಮು ಹೊಡೆಯೊಲ್ಲಾ!
ಕುತಂತ್ರವಿಲ್ಲದೆ.. 
ಅತಂತ್ರವಾಗದೆ.. 
ಸ್ವತಂತ್ರಳಾಗಿಹಳು!

Category: ಕನ್ನಡ ಚಿತ್ರಸಾಹಿತ್ಯ
Category: ಶುಭಮಂಗಳ ಚಿತ್ರ
Category: ಚಿ.ಉದಯಶಂಕರ್ ಸಾಹಿತ್ಯ
Category:Kannada